ಶಿಲೆಯ ಶಿಲ್ಪವಾಗಿಸಿ
ಕಗ್ಗಲ್ಲ ದೇಗುಲವಾಗಿಸಿ
ಮಂತ್ರ ಘೋಷ ..ಪೂಜೆ ನೇಮ
-ಗಳಲ್ಲಿ ಹುಡುಕುತ್ತಿದ್ದೇವೆ
'ನಿರ್ವಿಕಾರನ '
ವಿಜಯ ವೈಭೋಗವ
ತ್ಯಾಗ ಬಲಿದಾನವ
ಶಾಸನವಾಗಿಸಿ
ಭೂತಕನ್ನಡಿ ಹಿಡಿದು
ಹುಡುಕುತ್ತಿದ್ದೇವೆ
'ವಾಸ್ತವವ '
ರೋಡಿಗೆ ಹೆಸರಿಟ್ಟು
ಸರ್ಕಲ್ ನಲ್ಲಿ ಪ್ರತಿಮೆ ನಿಲ್ಲಿಸಿ
ಚಿತ್ರವಾಗಿಸಿ ,
ಪುಸ್ತಕದ ನಡುವಿನ
-ಹಾಳೆಗಳಲಿ ಹುಡುಕುತ್ತಿದ್ದೇವೆ
'ಮಹಾತ್ಮ ನ '
ನ್ಯಾಯವ ಕಟಕಟೆಯಲಿ ನಿಲ್ಲಿಸಿ
ಪ್ರೇಮವ ಸ್ಮಾರಕದಲಿ ಉಳಿಸಿ
ಭೋದಿವೃಕ್ಷದ ಕೆಳಗೆ
ಹುಡುಕುತ್ತಿದ್ದೇವೆ
'ಸಾಕ್ಷಾತ್ಕಾರವ '
ಭೂತಕನ್ನಡಿ ಹಿಡಿದು
ಹುಡುಕುತ್ತಿದ್ದೇವೆ
'ವಾಸ್ತವವ '
ರೋಡಿಗೆ ಹೆಸರಿಟ್ಟು
ಸರ್ಕಲ್ ನಲ್ಲಿ ಪ್ರತಿಮೆ ನಿಲ್ಲಿಸಿ
ಚಿತ್ರವಾಗಿಸಿ ,
ಪುಸ್ತಕದ ನಡುವಿನ
-ಹಾಳೆಗಳಲಿ ಹುಡುಕುತ್ತಿದ್ದೇವೆ
'ಮಹಾತ್ಮ ನ '
ನ್ಯಾಯವ ಕಟಕಟೆಯಲಿ ನಿಲ್ಲಿಸಿ
ಪ್ರೇಮವ ಸ್ಮಾರಕದಲಿ ಉಳಿಸಿ
ಭೋದಿವೃಕ್ಷದ ಕೆಳಗೆ
ಹುಡುಕುತ್ತಿದ್ದೇವೆ
'ಸಾಕ್ಷಾತ್ಕಾರವ '
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ