ಶನಿವಾರ, ಡಿಸೆಂಬರ್ 22, 2012

ರಂಗೋಲಿ ಬಿಡಿಸಿದ 
ಮಾತ್ರಕ್ಕೆ ,
ಅಂಗಳದ ಅಂದಗೆಡಿಸಿ 
ಹೋಗಬಹುದೆ? 
ಹಣತೆ ಹಚ್ಚಿದ 
ಮಾತ್ರಕ್ಕೆ .
ಕತ್ತಲ 'ಏಕಾಂತವನ್ನೂ '
ಹೊತ್ತಯ್ಯಬಹುದೆ ?

ನಿನ್ನ ಗುಂಗಲ್ಲಿ ಕವಿತೆ ಕಟ್ಟಿದ 
ಮಾತ್ರಕ್ಕೆ,
ಪ್ರತಿಪುಟವನ್ನೂ ಚಿತ್ತುಮಾಡುವ
ಧಾರ್ಷ್ಯ ತೋರಬಹುದೆ ?
ನಿನ್ನ ಹಾಜರಿಯಲ್ಲಿ ಹೂ ಅರಳಿದ
ಮಾತ್ರಕ್ಕೆ ,
ಬೇರಿಗೆ ಬಿಸಿನಿರೋಯ್ದು
ಹೋಗಬಹುದೇ ?

ಕಾಮೆಂಟ್‌ಗಳಿಲ್ಲ: