ಭಾನುವಾರ, ನವೆಂಬರ್ 18, 2012

ಬಿಡಿಗಾಸು ಹುಡುಗನ 
ಖಾಲಿ  ದಿಂಬಿನಲಿ 
ಕೋಟಿ ಕನಸ ಸುರಿದು 
ಹೊದಿಕೆ ತರಲು ಹೋದವಳು 
ಮೂರು ಚಳಿಗಾಲ  ಕಳೆದರೂ 
ತಿರುಗಿ ಬರಲಿಲ್ಲ ...


ಬರಿಗಾಲ ಹೈದನ 
ಕಾಲುದಾರಿಯಲಿ 
ಗುಲಾಬಿ ನೆಟ್ಟು 
ಬಿಂದಿಗೆ ಹಿಡಿದು ಹೋದವಳು 
ಮೂಗ್ಗು ಮುರುಟಿ ಹೋದರೂ 
ಇನ್ನು ನೀರ ತರಲಿಲ್ಲ ......

ಕಾಮೆಂಟ್‌ಗಳಿಲ್ಲ: