ಬುಧವಾರ, ಫೆಬ್ರವರಿ 1, 2012

ಉಪಸ್ಥಿತಿ ..

ಕತ್ತಲಲ್ಲಿ ಮಾತ್ರವೇ
ನೀನು ನೆನಪಾಗುವುದಾದರೆ
ಬೆಳದಿಂಗಳೇ ನನಗೆ ವರ್ಜ್ಯ !


ಕಂಬನಿಯಲ್ಲಿ ಮಾತ್ರವೇ
ನೀನು ಇರುವುದಾದರೆ
ವಿರಹದ ನೋವೆ ನನಗೆ ಆಪ್ಯ !

ಒಂಟಿತನದಲಿ ಮಾತ್ರವೇ
ನೀನು ಕಾಡುವುದಾದರೆ
ಏಕಾಂತವೂ ನನ್ನ ಪಾಲಿಗೆ ದಿವ್ಯ !!!

ಕಾಮೆಂಟ್‌ಗಳಿಲ್ಲ: