ಬುಧವಾರ, ಫೆಬ್ರವರಿ 1, 2012

ಭಿನ್ನಾಭಿಪ್ರಾಯ

ನನ್ನದೆಯಲ್ಲೂ ಇವೆ
ನೂರು ಕನಸು ಸಾವಿರ ಆಸೆ
ಅವುಗಳ ಬಣ್ಣ ಕಪ್ಪು ಬಿಳುಪು

ಕಣ್ಣೊಳಗೆ ಮೂಡಿ ನಿಂತಿವೆ
ನೂರು ಚಿತ್ರ ಸಾವಿರ ನಕ್ಷತ್ರ
ಅವುಗಳ ಬಣ್ಣವೂ ಕಪ್ಪು ಬಿಳುಪೇ

ಆದರೆ ಅವಳಿಗೆ ,
ರಂಗು ರಂಗಿನ ರಂಗವಲ್ಲಿ ನೆಚ್ಚು
ಏಳು ಬಣ್ಣದ ಕಾಮನಬಿಲ್ಲಿನ ಹುಚ್ಚು
ಗರಿ ಬಿಚ್ಚಿ ಕುಣಿಯೋ ನವಿಲು ಅಚ್ಚುಮೆಚ್ಚು

ಕಾಮೆಂಟ್‌ಗಳಿಲ್ಲ: