ನೆನಪೆಂದರೆ ಹಾಗೆ ,
ಮಳೆ ಬಂದರೆ ಸೋರುವ
ಮಾಳಿಗೆಯಂತೆ ,
ದಿಕ್ಕೆಟ್ಟು ಹಾರುವ
ಬಣ್ಣದ ಗಾಳಿಪಟದಂತೆ,
ಜಗಿದು ಅಗಿದು ಉಳಿದ
ತಾಂಬೂಲದಂತೆ,
ಅರ್ಧಂಬರ್ದ ಉರಿದ
ಆಶ್ ಟ್ರೇನ ಸಿಗರೇಟ್ ನಂತೆ !
ಕನಸೆಂದರೆ ಹಾಗೆ,
ಅಮ್ಮನ ಕೈ ತುತ್ತಿನ
ಅನ್ನದ ಮಿದಿಕೆಯಂತೆ ,
ಮುಜಾವಿನ ಮಂಜಿನ
ಹೊದಿಕೆಯಂತೆ ,
ಜತನವಾಗಿರಿಸಿದ ಅಪ್ಪನ
ಆಸ್ತಿ ಪತ್ರದಂತೆ ,
ಹೊಡೆದು ಹೋದ ಅಜ್ಜನ
ಕನ್ನಡಕದ ಫ್ರೇಮಿನಂತೆ !!
ಸುಖವೆಂದರೆ ಹಾಗೆ ,
ಬಡಜೋಗಿಯ ಬಗಲ
ಜೋಳಿಗೆಯಂತೆ,
ಹಸಿದು ಉಂಡಾಗ
ಬಂದ ತೇಗಿನಂತೆ,
ಅಚಾನಕ್ಕಾಗಿ ಮುಗಿದ
ಬೈಕ್ ನ ಪೆಟ್ರೋಲ್ ನಂತೆ,
ಆಕಸ್ಮಾತಾಗಿ ತಪ್ಪಿದ
ಬಸ್ಸಿನಂತೆ !!!
ಬದುಕೆಂದರೆ ಹಾಗೆ ,
ಮುಗಿಯದ ಪುಸ್ತಕದ
ಬೆನ್ನುಡಿಯಂತೆ,
ಕುರುಡರು ವರ್ಣಿಸಿದ
ಆನೆಯಂತೆ,
ತಣ್ಣನೆಯ ಅಲೆಗಳ
ಸುನಾಮಿ ಸಪ್ಪಳದಂತೆ,
ನೆನಪಾಗದೆ ಸತಾಯಿಸುವ
ಪಾಸ್ವರ್ಡ್ ನಂತೆ !!!!!
1 ಕಾಮೆಂಟ್:
nenapu chennaaide :)
ಕಾಮೆಂಟ್ ಪೋಸ್ಟ್ ಮಾಡಿ