ಎರಡು ಅನುಭವವೇ ,
ಆದರೆ ,
ನಡೆವಾಗ ಎಡೆವುದು ಮುಗ್ದತೆ !
ಎಡವಿದಲ್ಲೇ ಎಡೆವುದು ಅಜ್ಞಾನ !
ಒಂದು ತಿಳುವಳಿಕೆ
ಮತ್ತೊಂದು ಅರೆವಳಿಕೆ!!
ಎರಡು ಭಾವವೇ
ಆದರೆ,
ಮನಸಾರೆ ಒಲಿಯುವುದು ಪ್ರೇಮ !
ಮಿತಿ ಮೀರಿ ನಂಬುವುದು ಶರಣಾಗತಿ !
ಒಂದು ಮೋಹ
ಮತ್ತೊಂದು ವ್ಯಾಮೋಹ !!
ಎರಡು ಬಣ್ಣವೇ
ಆದರೆ,
ಕಪ್ಪು .
ಅಂಧಕಾರದ ಸಂಕೇತ!
ಬಿಳುಪು
ಪರಂಜ್ಯೋತಿಯ ಪ್ರತೀಕ !!
1 ಕಾಮೆಂಟ್:
nija..
ಕಾಮೆಂಟ್ ಪೋಸ್ಟ್ ಮಾಡಿ