ಗುರುವಾರ, ಸೆಪ್ಟೆಂಬರ್ 29, 2011

ಫರಕು !!!

ಮಲೆನಾಡಿನ ಹುಡುಗಿಗೆ
ಮರಳುಗಾಡಿನ ಕುರಿತು
ಏನು ಗೊತ್ತು?
ಹಸಿರಿನರಮನೆಯ ಅರಸಿಗೆ
ಬಟಾ ಬಯಲಿನ ಕುರಿತು
ಏನು ಗೊತ್ತು ?


ಕಂಡದ್ದನ್ನ ಕ್ಷಣದಲ್ಲೇ
ಕೊಳ್ಳುವ ಕೊಳ್ಳುಬಾಕಳಿಗೆ
ಕೂಡಿಟ್ಟು ಕೊಂಡ ಅಂಗಿಯ
ಮುಚ್ಚಿಟ್ಟು ತಿಂದ ತಿಂಡಿಯ ಕುರಿತು
ಏನು ಗೊತ್ತು ?

ತಪ್ಪಿದ ರಾಂಕ್ ಗೆ
ತಲ್ಲಣಿಸುವ ಮಹತ್ವಕಾಂಕ್ಷಿಗೆ
ಜಸ್ಟ್ ಪಾಸ್ ಆದವನ
ಆತಂಕದ ಕುರಿತು
ಏನು ಗೊತ್ತು ?

ಕಣ್ಣೆದುರೇ ಸ್ವರ್ಗ
ಕಾಲ ಬುಡದಲ್ಲೇ ಸಂತಸ
ಕಂಡವಳಿಗೆ
ಬರಿಗಾಲ ಫಕೀರನ
ಹತಾಶೆಯ ಕುರಿತು
ಏನು ಗೊತ್ತು ?

ಕಾಮೆಂಟ್‌ಗಳಿಲ್ಲ: