'ನಿಮ್ಮ ಡೇಟ್ ಆಫ್ ಬರ್ತ್ ಎಷ್ಟು' ?
ಗೋಚರಿಸೋ ವಯಸ್ಸನ್ನ ಮರೆಮಾಚೋ
ಇಂಗಿತ ನನ್ನದು !
ಕೂದಲ ಬಣ್ಣ ಅಸಲೋ ನಕಲೋ
ತಿಳಿಯುವ ತವಕ ಎಲ್ಲರದು !!
ಒಂದು ಪ್ರಶ್ನೆಗೆ ಒಂದೇ ಉತ್ತರ
ಒಂದುಬಾನಿಗೆ ಒಬ್ಬನೇ ಚಂದಿರ
ನಿಜ,
ಆದರೆ ನಕ್ಷತ್ರಗಳು ಹಲವಿದೆಯಲ್ಲ !
ಉಗಾದಿಯ ಆಜುಬಾಜಿನ ಲೆಕ್ಕ
ಅಮ್ಮನದು !
ಅಟ್ಟದ ಹಲಗೆ ಮೇಲೆ ಅಳಿಸಿಹೋಗಿರುವ
ಅಸ್ಪಷ್ಟ ದಾಖಲಾತಿ
ಅಪ್ಪನದು !
ಕೇವಲ ದಾಖಲೆಗಷ್ಟೆ ಉಳಿದಿರುವ
ಮಾಹಿತಿ
ಶಾಲೆಯದು !
ಕಾಲ ಆರೋಹಣ
ಇಲ್ಲಿ ಬಳ್ಳಿಗಿಂತ ಕಾಯಿ ಭಾರ
ಆಯಸ್ಸಿಗಿಂಥ ಕನಸು ಭಾರ !
ಹುಟ್ಟು, ಹಬ್ಬವಾದರೆ
"ಬದುಕು ದಿಬ್ಬಣ"
ಹೆಜ್ಜೆಗುರುತಿಗಿರುವ ಕಿಮ್ಮತ್ತು
ಕ್ರಮಿಸಿದ ದೂರಕ್ಕೂ ಇದೆ
ಗಳಿಸಿದ ಅನುಭವಕ್ಕೂ ಇದೆ
1 ಕಾಮೆಂಟ್:
nija nija.. Sir... ArthavatthaGide..nija nija.. Sir... ArthavatthaGide..
ಕಾಮೆಂಟ್ ಪೋಸ್ಟ್ ಮಾಡಿ