ನಿಂತರೆ ಕೊಚ್ಚೆ ಹರಿದರೆ ತೀರ್ಥ !
ಅಪ್ಪ ನಿಂತಲ್ಲೇ ನಿಂತಿದ್ದ ನಿಶ್ಚಲವಾಗಿ ,
ನಿರುಮ್ಮಳನಾಗಿ,
ಮಳೆಯನ್ನೇ ನೆಚ್ಚಿಕೊಂಡ ಕೆರೆಯಂತೆ !
ನನ್ನದು ನದಿಯಾಗುವ ಉಮೇದು !!
ಹಳ್ಳ ಕೊಳ್ಳ ಸೇರಿ ಹರಿದೆ,
ತಗ್ಗು ದಿಣ್ಣೆ ಹತ್ತಿ ಇಳಿದೆ ,
ಗರಿ ಬಿಚ್ಚಿಕೊಂಡು ಗುರಿ ನೆಚ್ಚಿಕೊಂಡು.
ಕನಸುಗಳ ಹೆಣ ತೇಲಿದವು
ಅಕಾಲ ಮರಣದಿಂದ
ಸಕಾಲದಿ ಸಾಕಾರವಾಗದೆ ,
ನನ್ನ ಚಲನ ಶೀಲತೆಯ ಅಣಕಿಸಿತು ಅಪ್ಪನ ಜಡತೆ!
ತಳಕಾಣು ವಷ್ಟು ನಿಚ್ಚಳ ನಾಗಿದ್ದ" ಅಪ್ಪ"
ನಾನೇ ಬಗ್ಗಡವಾದೆ ! ಕೊನೆಗೊಮ್ಮೆ
ಉಪ್ಪು ಕಡಲ ಸೇರಿ
ಉಪ್ಪಾದೆ ,ಮುಪ್ಪಾದೆ ......
ಅಪ್ಪ ನಿಂತಲ್ಲೇ ನಿಂತಿದ್ದ ನಿಶ್ಚಲವಾಗಿ ,
ನಿರುಮ್ಮಳನಾಗಿ,
ಮಳೆಯನ್ನೇ ನೆಚ್ಚಿಕೊಂಡ ಕೆರೆಯಂತೆ !
ನನ್ನದು ನದಿಯಾಗುವ ಉಮೇದು !!
ಹಳ್ಳ ಕೊಳ್ಳ ಸೇರಿ ಹರಿದೆ,
ತಗ್ಗು ದಿಣ್ಣೆ ಹತ್ತಿ ಇಳಿದೆ ,
ಗರಿ ಬಿಚ್ಚಿಕೊಂಡು ಗುರಿ ನೆಚ್ಚಿಕೊಂಡು.
ಕನಸುಗಳ ಹೆಣ ತೇಲಿದವು
ಅಕಾಲ ಮರಣದಿಂದ
ಸಕಾಲದಿ ಸಾಕಾರವಾಗದೆ ,
ನನ್ನ ಚಲನ ಶೀಲತೆಯ ಅಣಕಿಸಿತು ಅಪ್ಪನ ಜಡತೆ!
ತಳಕಾಣು ವಷ್ಟು ನಿಚ್ಚಳ ನಾಗಿದ್ದ" ಅಪ್ಪ"
ನಾನೇ ಬಗ್ಗಡವಾದೆ ! ಕೊನೆಗೊಮ್ಮೆ
ಉಪ್ಪು ಕಡಲ ಸೇರಿ
ಉಪ್ಪಾದೆ ,ಮುಪ್ಪಾದೆ ......

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ