ಗುರುವಾರ, ಜೂನ್ 2, 2011

ಏನು ಗೀಚಿದರೂ.....

 ಏನು   ಗೀಚಿದರೂ,
ಶಾಯಿ ಮುಗಿಯುತಿತ್ತೇನೋ
ಆದರೆ ನಾನು ಬರೆದದ್ದು
ನಿನ್ನದೇ ಶಾಯಿರಿಯನ್ನ !

ಹೇಗೆ ಬದುಕಿದರೂ ,
ಪಯಣ ಸಾಗುತಿತ್ತೇನೋ
ಆದರೆ  ನಾನು ಬಯಸಿದ್ದು 
ಅದ್ದೂರಿ   ಮೆರವಣಿಗೆಯನ್ನ   !

ಕಣ್ಣು ಮತ್ತೊಬ್ಬಳನ್ನ ,
ಹುಡುಕುತ್ತಿತ್ತೇನೋ
ಆದರೆ ನಾನು ಮೆಚ್ಚಿದ್ದು
ಹೋಲಿಕೆಯಿರದ ನಿನ್ನ   ನಗುವನ್ನ!

ಹೆಜ್ಜೆಗಳ ಭಾರವನ್ನ ,
ಹೃದಯ  ಭರಿಸುತಿತ್ತೇನೋ
ಆದರೆ ನೀನು ಬಿಟ್ಟು ಹೋದದ್ದು
 ಹೆಜ್ಜೆಯ ಗುರುತುಗಳನ್ನ !!

ಧಿಕ್ಕರಿಸಿ ಹೋದ ದಿನವೇ,
ದುಃಖವೂ ಮುಗಿಯುತಿತ್ತೇನೋ
ಆದರೆ ನೀ ಉಳಿಸಿ ಹೋದದ್ದು
ಕಾಡುವ ಹಸಿ ನೆನಪನ್ನ!!

ಮರೆಯಾದ ಮರು ಕ್ಷಣವೇ ,
ಮರೆತು ಹೂಗುತಿತ್ತೇನೋ
ಆದರೆ ನೀ ಕಬಳಿಸಿದ್ದು
ಜತನದ ನನ್ನ ಕನಸುಗಳನ್ನ !!

ಏನೇ ಆದರೂ  ಮನಸು ,
 ಕ್ಷಮಿಸುತಿತ್ತೇನೋ 
ಆದರೆ ನೀನು ಕೊಂದದ್ದು
ಅಮಾಯಕ ಪ್ರೇಮವನ್ನ!!

ಕಾಮೆಂಟ್‌ಗಳಿಲ್ಲ: