ಸನಿಹ ಬೇಡುತಿಹುದು ಜೀವ
ಜಾರಿ ಮಾಡೆ ಹುಡುಗಿ.
ಯಾರಿಗೂ ತಿಳಿಯದಂತೆ
ನೋಡು ಒಮ್ಮೆ ತಿರುಗಿ.
ಕಂಡು ನಿನ್ನ ಬೆರಗಾದೆ
ತೇರಿನ ಬೀದಿಯಲಿ ,
ಗೆಳತಿಯರ ಗುಂಪಿನಲಿ .
ಮೈಮರೆತು ಸೆರೆಯಾದೆ
ಸೆರೆಹಿಡಿವ ನೆಪದಲ್ಲಿ ,
ನಿನ್ನ ಕದಿವ ಭರದಲ್ಲಿ.
ನೀ ಜೀಕುತ್ತ ನಡೆವಾಗ
ಜಾರಿಬಿದ್ದ ಕಿರುಗೆಜ್ಜೆ ,
ಜೋಪಾನ ನನ್ನೀ ಜೀಬಿನಲಿ .
ಒಲ್ಲೆಯೆಂದು ನೀ,
ಉಳಿಸಿಹೋದ ಬಳೆಯ ಸಾಲು
ಕಿಂಕಿಣಿಸಿದೆ, ಖಾಸ ಕೋಣೆಯ ಶೋಕೇಸಿನಲಿ
ಇಳಿಸಂಜೆಗೆ ಸಿಗು ಒಬ್ಬಳೇ
ಮನಸಾರೆ ಕೇಳೋಕೆ,
ಮನದ ಎಲ್ಲ ಮಾತುಗಳ.
ಬರಿದಾಗುವೆ ,ಹಗುರಾಗುವೆ,
ಹರವಿಟ್ಟು , ನನ್ನೆದೆಯ ತಳಮಳ .
ತಡ ಮಾಡದೇ ಬಾ ಗೆಳತಿ
ಯಾಕಿನ್ನು ನಿನಗೆ ಸಂಶಯ ,
ಬೇಕೆಂದರೆ ಕೇಳಿನೋಡು
ಕಿರುಬೆರಳಿಗೆ ,
ನನ್ನ ಕಿರು ಪರಿಚಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ