ಮಧುರ ಮಿಲನ
ಚಾದರವ ಸರಿಸಿಬಂದ ತುಂಬು ಚಂದಿರ
ಮುನಿಸ ಮುಗಿಸಿ,
ತುಂಬಿ ಕೊಂಡಳು ಕೊಳದ ಸುಂದರಿ
ಭರಸೆಳೆದು ರಮಿಸಿ
ನಿಂತು ನೋಡಿತು ತಾರ ಮೇಳ
ಮಧುರ ಮಿಲನವ
ಶ್ರುತಿ ಹಿಡಿದು ಹಾಡಿತು ತಂಪು ಗಾಳಿ
ಇಂಪು ಗಾನವ
ಲಯಬಿಡದೆ ಬಳುಕಿದ ಗೋಲ ಚಂದಿರ
ಸಖಿಯ ಸಖ್ಯದಿ
ಒಲ್ಲೆ ಯೆಂದರು ನೆನಪಾಗಿ ಕಾಡಿತು
ನನ್ನ ಬೇಗುದಿ
ನನ್ನವ ಇವನಿಗಿಂತ ಸುಂದರ
ಕಲೆಗಳಿಲ್ಲದ ಚಂದಿರ!
ಬಂದೆ ಬರುವ ಇಂದು, ಹೊಳೆ ದಂಡೆಗೆ.
ಹಿಡಿದು ಮಲ್ಲೆ ದಂಡೆ
ತಪ್ಪಿಗಾಗಿ ಮತ್ತಿನ ಕಪ್ಪ ಕೊಡುವೆ
ತೆಕ್ಕೆ ಬಿಡದೆ ಅಪ್ಪುವೆ
ನಮ್ಮ ಮಧುರ ಮಿಲನ ಕಂಡು
ಖಂಡಿತ ನೀ ಕರುಬುವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ