ಸ್ವಗತ
ಶುಕ್ರವಾರ, ಆಗಸ್ಟ್ 10, 2012
ಸು -ಪ್ರಭಾತ ...
ಇಬ್ಬನಿ ಕುಡಿದ ಕಣ್ಣಿನ
ದೊರೆಸಾನಿ ;
ಅವಳ ನೋಟ
ನಿರ್ಮಲ ,ಪ್ರಾಂಜಲ !
ಗುಲಾಬಿ ಗೊಂಚಲ ಚೆಂದದ
ಹೂದಾನಿ;
ಅವಳ ನಗು
ಮೃದುಲ ,ಕೋಮಲ !
ನವಿಲುಗರಿ ಕನಸಿನ
ಯಜಮಾನಿ ;
ಅವಳ ಮನಸು
ಚಂಚಲ ,ವಿಹ್ವಲ !
ಜಿಟಿ ಜಿಟಿಸೋ ತುಂತುರು
ಮಳೆಹನಿ ;
ಅವಳ ಪ್ರೀತಿ
ನಿಶ್ಚಲ ..ಅಚಲ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ