ಅದೇ ದಾರಿ ಅದೇ ತಿರುವು
ಮತ್ತೆ ಮತ್ತದೇ 'ಬೇಸರ '
ಹಳೆಯ ಅಲೆಗಳೇ ತೆರಳಿ ಮರಳಿವೆ
ಇದು
ಉಪ್ಪು ನೀರಿನ ಸಾಗರ ..!
ನೀರಿನಲ್ಲೇ ಮುಳುಗಿ ಸತ್ತಿದೆ
ಮೀನು
ಹುಟ್ಟಿ ..ಈಜಿ.. ಈಜಿ 'ರೇಜಿಗೆ'
ಜಡ್ಡುಗಟ್ಟಿದ .ಈ .ಮೈ ಮನಸಿಗೆ ,
'ಸಭ್ಯತೆ 'ಯೇ ಮೈಲಿಗೆ
ಹದ್ದು ಮೀರಲು ಬುದ್ದಿ ಭೀತಿ
ಕೈ ಯ ಕಟ್ಟಿದೆ ನ್ಯಾಯ ನೀತಿ
ಹಳೆಯ ಹಾಡದು ಮರೆತು ಹೋಗಲಿ
ನೆನಪ ಕೀಲಿಯು ಕಳೆದು ಹೋಗಲಿ
ದಿಕ್ಕ ಬದಲಿಸಿ ನದಿಯು ಹರಿಯಲಿ ..
ಜಡ್ಡುಗಟ್ಟಿದ .ಈ .ಮೈ ಮನಸಿಗೆ ,
'ಸಭ್ಯತೆ 'ಯೇ ಮೈಲಿಗೆ
ಹದ್ದು ಮೀರಲು ಬುದ್ದಿ ಭೀತಿ
ಕೈ ಯ ಕಟ್ಟಿದೆ ನ್ಯಾಯ ನೀತಿ
ಹಳೆಯ ಹಾಡದು ಮರೆತು ಹೋಗಲಿ
ನೆನಪ ಕೀಲಿಯು ಕಳೆದು ಹೋಗಲಿ
ದಿಕ್ಕ ಬದಲಿಸಿ ನದಿಯು ಹರಿಯಲಿ ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ