ಗುರುವಾರ, ಮಾರ್ಚ್ 31, 2011

ನನಗೇನೋ ಅನುಮಾನ

ಕಂಡಿಲ್ಲ ಯಾವತ್ತೂ
ಈ ಪುಳಕನಾ
ಮೈ ಮನಸು ಬಿಸಿಯಾಗೋ
ತವಕನಾ
ನನಗೇನೋ ಅನುಮಾನ
ಇದು ಪ್ರೀತಿನಾ

ನನಗಿಂತ ನಿನಮೇಲೆ
ಅಭಿಮಾನ
ದಿನಪೂರ ನಿನದೇನೆ
ಗುಣಗಾನ
ತುಟಿವರೆಗೆ ಬಂದ
ಈ ಮಾತನ್ನ
ಹೇಳೋಕೆ ಧಾವಂತ
ಬಿಗುಮಾನ
ನನಗೇನೋ ಅನುಮಾನ
ಇದು ಪ್ರೀತಿನಾ!!

ತಿಳಿಸಲೇ ಬೇಕಿಂದು
ಈ ತಲ್ಲಣ
ಇದಕೆಲ್ಲ ನೀನೇನೇ
ಕಾರಣ
ಕಿವಿಗೊಟ್ಟು ಕೇಳು
ಈ ರಿಂಗಣ
ಕೇಳದೆ ಹೋದರೆ
ದಾರುಣ!

ಕಾಮೆಂಟ್‌ಗಳಿಲ್ಲ: